ಭಾನುವಾರ, ಮೇ 27, 2012

ರಂಗೋಲಿ - 2



ಸೂರ್ಯೋದಯ  

 

 
ಸೂರ್ಯನನ್ನೊಂದು ವ್ರತ್ತಕಾರದ ಬಿಲ್ಲೆ ಎಂಬುದಾಗಿ ಕಲ್ಪಿಸಿಕೊಂಡರೆ ಆ ಬಿಲ್ಲೆಯ ಕೇಂದ್ರಬಿಂದುವು ದಿಗಂತದೊಂದಿಗೆ ಹೊಂದಿಕೆಯಾದಾಕ್ಷಣ ಸುರ್ಯೋದಯವಾಯಿತೆಂದು ತಿಳಿಯಬೇಕು.


ಚಿತ್ರ 1A: 1 ಇಲ್ಲಿ ಮುಂಜಾನೆ [MT] ಯಲ್ಲೊಬ್ಬ ವೀಕ್ಷಕ. ಈತನ ಪೂರ್ವದಿಗಂತ ಸೂರ್ಯನಿಗೆ ಗುರಿ ಮಾಡಿದೆ. ಇವನಿಗೀಗ ಸೂರ್ಯೋದಯವಾಗುತ್ತಿದೆ. ಅಂದರೆ ಮುಂಜಾನೆ. ನಂತರದ ಮುರು ಗಂಟೆಗಳ ಅವಧಿಯಲ್ಲಿ [ಚಿತ್ರ 1A 2] ಭೂಮಿ ತನ್ನ  ಅಕ್ಷದಲ್ಲಿ 45º ಕೋನ [1/8 ಸುತ್ತು] ತಿರುವು ಹೊಂದಿರುತ್ತೆ.ಈಗ ಈತನ ಪೂರ್ವದಿಗಂತವು ಸೂರ್ಯನಿಂದ ಕೆಳಗೆ 45º ಕೋನ ಪೂರ್ವಕ್ಕೆ ಬಾಗಿದೆ. ಹಾಗಾಗಿ ಈತನ ಪೂರ್ವ ದಿಗಂತದಿಂದ ಮೇಲೆ 45º ಕೋನೋನ್ನತಿಯಲ್ಲಿ [ANGULAR ALTITUDE] ಸುರ್ಯವಿರುತ್ತದೆ. ನಂತರದ 3 ಗಂಟೆಗಳ ಅವಧಿಯಲ್ಲಿ [ಚಿತ್ರ 1A 3] ಸೂರ್ಯವು ವೀಕ್ಷಕನ ಪೂರ್ವ ದಿಗಂತದಿಂದ 90º ಕೋನೋನ್ನತಿಯಲ್ಲಿರುತ್ತದೆ = ಮಧ್ಯಾಹ್ನ.
ಮುಂದಿನ 6 ಗಂಟೆಗಳ ಅವಧಿಯಲ್ಲಿ ಭೂಮಿ ತನ್ನ ಅಕ್ಷದಲ್ಲಿ ಒಟ್ಟಿಗೆ 180º ಕೋನ ತಿರುವು ಪಡೆದುಕೊಂಡು ಅರ್ಧ ದಿನದ ಆವರ್ತನೆಯನ್ನು ಮುಗಿಸಿರುವುದು. [ಚಿತ್ರ 1A 4] ಇದೀಗಷ್ಟೇ  ವೀಕ್ಷಕನ ಪಶ್ಚಿಮ ದಿಗಂತವು ಸೂರ್ಯನಿಗೆ ಗುರಿಮಾಡಿರುತ್ತದೆ. ಅಂದರೆ ಸೂರ್ಯ ವೀಕ್ಷಕನ ಪಶ್ಚಿಮ ದಿಗಂತದಲ್ಲಿರುತ್ತದೆ. ಅಂದರೆ ಸೂರ್ಯಾಸ್ತವಾಗುತ್ತಿದೆ ಅಂದರೆ ಮುಸ್ಸಂಜೆ [ET]. ಇಲ್ಲಿ ಮುಂಜಾನೆಯಲ್ಲಿರುವವನು ಇದೀಗಷ್ಟೇ ರಾತ್ರಿ ವಲಯದಿಂದ ಹಗಲಿನ ವಲಯಕ್ಕೆ ಪ್ರವೇಶಿಸುತ್ತಿದ್ದಾನೆ. ಮುಸ್ಸಂಜೆಯಲ್ಲಿರುವವನು  ಹಗಲಿನ ವಲಯದಿಂದ ರಾತ್ರಿಯ ವಲಯಕ್ಕೆ ಪ್ರವೇಶಿಸುತ್ತಿದ್ದಾನೆ. MT ಯಲ್ಲಿರುವವನಿಗೆ ಪೂರ್ವ ದಿಗಂತದಲ್ಲಿ ಮತ್ತು ET ಯಲ್ಲಿರುವವನಿಗೆ ಪಶ್ಚಿಮ ದಿಗಂತದಲ್ಲಿ ಅರ್ಧರ್ಧ ಸೂರ್ಯ ಏಕಕಾಲದಲ್ಲಿ ಕಾಣುತ್ತಿರುವುದು. ಅದು ಹೇಗೆಂದರೆ ಈ ಎರಡು ದಿಗಂತಗಳ ನಡುವುಇನ ಅಂತರವನ್ನು [12756 ಕಿ.ಮೀ] ಭೂಮಿಯಿಂದ ಸೂರ್ಯನಿಗಿರುವ ಅಂತರ ಮತ್ತು ಸೂರ್ಯನ ದೈತ್ಯ ಗತ್ರದೊಟ್ಟಿಗೆ ಹೋಲಿಸಿದರೆ ಈ ಎರಡು ದಿಗಂತಗಳು ಒಂದರೋಳಗೊಂದು ಐಕ್ಯವಾಗಿವೆ ಎಂದೇ ತಿಳಿಯಬೇಕು.

   

ಕಾಮೆಂಟ್‌ಗಳಿಲ್ಲ: