ಬುಧವಾರ, ಮೇ 30, 2012

ರಂಗೋಲಿ - 3


 ಧ್ರುವತಾರೆ 

 


ಚಿತ್ರ 2 : TRUE SPHERE: 
 ಇಲ್ಲೀಗ ಹೇಳಲಿಕ್ಕಿರುವುದು ಭೂಮಿಯ ಹೊರಗೆ ನಿಂತು ನೋಡುತ್ತಿರುವ ವೀಕ್ಷಕನ ನೋಟವಾಗಿದೆ. ಆ ವೀಕ್ಷಕ ನೀವೇ ಆಗಿರುವ ಅಗತ್ಯವಿದೆ. ಪೂರ್ವಕ್ಕೆ ಮುಖಮಾಡಿ ಪಶ್ಚಿಮ ದಿಕ್ಕಿನಲ್ಲಿ ಭೂಮಿಯಿಂದ ಹೊರಗೆ ಬಾಹ್ಯಾಕಾಶದಲ್ಲಿ ಸಾಕಷ್ಟು          ರದಲ್ಲಿ ನಿಂತು ಭೂಮಿಯ ಉತ್ತರ ಧ್ರುವ ಎಡಬದಿಗೆ, ದಕ್ಷಿಣ ಧ್ರುವ ಬಲ ಬದಿಗೆ,  ಸೂರ್ಯ ಭೂಮಿಯಿಂದ ಕೆಳಗೆ ಇರುವುದನ್ನು [ಮಧ್ಯ ರಾತ್ರಿ] ಕಲ್ಪಿಸಿಕೊಳ್ಳುವುದು. EQUATOR= ಭೂಮಿಯ ಸಮಭಾಜಕ ವ್ರತ್ತ. NP= ಉತ್ತರ ಧ್ರುವ, SP= ದಕ್ಷಿಣ ಧ್ರುವ. SP ಮತ್ತು NP ಯನ್ನು ಜೋಡಿಸುವ ರೇಖೆ ET ಮುಸ್ಸಂಜೆ ವಲಯವಾಗಿದೆ. ಈ ET ರೇಖೆಯ ಬಳಿಯೊಬ್ಬ ಇರಬಹುದಾದ ವೀಕ್ಷಕ ಇದೀಗ ಹಗಲಿನ ವಲಯದಿಂದ ರಾತ್ರಿ ವಲಯಕ್ಕೆ ಪ್ರವೇಶಿಸುತ್ತಿದ್ದಾನೆಂಬುದಾಗಿ ಕಲ್ಪಿಸಿಕೊಂಡು
ಭೂಮಿಯ ಆವರ್ತನೆಯ ದಿಕ್ಕನ್ನು  ಅರ್ಥಮಾಡಿಕೊಳ್ಳುವುದು. ಅಲ್ಲಿ ಸಮಭಾಜಕವ್ರತ್ತದ ಬಳಿ ಇರುವ ವೀಕ್ಷಕನಿಗೆ ಉತ್ತರ ಬಿಂದುವಿನ ಬಳಿ ಧ್ರುವ ತಾರೆ ಇರುವುದು. ಆತನ ದಿಗಂತವು ಸಮಭಾಜಕ ವ್ರತ್ತದ ತಲಕ್ಕೆ ಲಂಬವಾಗಿದ್ದು ಅಕ್ಷಕ್ಕೆ ಸಮಾಂತರದಲ್ಲಿದೆ. ಮತ್ತು ವಿಷುವದ್ ವ್ರತ್ತವು ಪೂರ್ವ ಪಶ್ಚಿಮ ಮತ್ತು ಶಿರೋಬಿಂದುವಿನ ಮುಉಲಕ ಹಾದು ಹೋಗಿದೆ.ಉತ್ತರ ಹಾಗು ದಕ್ಷಿಣ ಖಗೋಲಧ್ರುವಗಳು  ಉತ್ತರ ದಕ್ಷಿಣ ಬಿಂದುಗಳಲ್ಲಿ ಐಕ್ಯವಾಗಿರುತ್ತವೆ.  

ಕಾಮೆಂಟ್‌ಗಳಿಲ್ಲ: