ಮಂಗಳವಾರ, ಮೇ 5, 2009

ರಾತ್ರಿ ಕತ್ತಲಿನ ರಹಸ್ಯ!!


ಎರಡು ಶತಮಾನಗಳ ಹಿಂದಿನ ಕಥೆ ಇದು.. ಜರ್ಮನಿ ಯಲ್ಲಿ ಲ್ಬರ್ ಎಂಬ ವಿಜ್ಞಾನಿ ಇದ್ದ..
ಖಗೋಳ
, ತಾರೆಗಳು ಇವುಗಳ ಬಗ್ಗೆ ಮಹಾ ಆಸಕ್ತಿ ಇದ್ದ ಅಧ್ಭುತ ವ್ಯಕ್ತಿ...
ಒಮ್ಮೆ
ರಾತ್ರಿ ಅನಂತ ಆಕಾಶವನ್ನು ನೋಡುತ್ತಾ ಒಂದು ಪ್ರಶ್ನೆಯನ್ನು ತನಗೆ ತಾನೆ ಕೇಳಿಕೊಂಡ...
ರಾತ್ರಿಯೂ
ಯಾಕೆ ಹಗಲ ಹಾಗಿಲ್ಲ?
ಪುನಃ
ತನ್ನ ಯೋಚನೆಗೆ ತಾನೇ ನಕ್ಕ..
ಆದರೆ
ಅವನ ಒಳಗಿನ ವಿಜ್ಞಾನಿ ಅವನನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡಲಿಲ್ಲ..
ಪ್ರಶ್ನೆಯನ್ನು ಕೆದಕಲು ಕೂತ..
ಅವನ
ಯೋಚನಾ ಲಹರಿ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತ ಹೀಗೆ ಸಾಗಿತು...
ಅಂದ
ಹಾಗೆ ರಾತ್ರಿ ಯಾಕೆ ಕತ್ತಲು ಇಲ್ಲ? ರಾತ್ರಿ ಮನೆ ಹೊರಗೆ ಚಾಪೆ ಹಾಸಿಕೊಂಡು ಚಂದ್ರನಿಲ್ಲದ ಆಗಸವನ್ನು ನೋಡುತ್ತಾ ಯೋಚಿಸಲು ಪ್ರಾರಂಭಿಸಿದ..
ಉತ್ತರ
ಸರಳ..ಸೂರ್ಯ ಇಲ್ಲ..
ಅಂದರೆ
ಎಲ್ಲಿರುತ್ತಾನೆ?
ಅವನು
ಇದ್ದಲ್ಲೇ!!?? ಇರುತ್ತಾನೆ..
(
ತನ್ನ ತಾಯಿ ಬ್ರಹ್ಮಾಂಡ ಹಾಲು ಹಾದಿ ಕೇಂದ್ರಕ್ಕೆ ಸುತ್ತು ಬರುತ್ತಿರುತ್ತಾನೆ ಎಂಬುವುದು ಬೇರೆ ವಿಷಯ ಬಿಡಿ.).
ಆದರೆ
ಭೂಮಿ ಸೂರ್ಯನ ಸುತ್ತ ಮಾತ್ರ ಸುತ್ತುತ್ತಿಲ್ಲ.
ತನ್ನ
ಸುತ್ತಲೂ ತಾನು ವಾಲಿಕೊಂಡು ಬುಗುರಿಯಂತೆ ತಿರುಗುತ್ತಿದೆ.
ಯಾವಾಗ
ಭೂ ತಾಯಿ ತನ್ನ ಒಂದು ಭಾಗವನ್ನು ಸೂರ್ಯನ ಹೊಂಗಿರಣಗಳಿಗೆ ಒಡ್ಡಿ ಇರುತ್ತಾಳೋ ಆಗಲೇ ಭೂಮಿಯ ಮತ್ತೊಂದು ಭಾಗದಲ್ಲಿ ಜೀವ ಕೋಟಿ ಕತ್ತಲೆಯ ಸೆರಗಲ್ಲಿ ಮುಳುಗಿರುತ್ತದೆ...
"ಸಮಾಧಾನ ವಾಯಿತು ತಾನೆ?" ತನಗೆ ತಾನೆ ಹೇಳಿಕೊಂಡು ಮಗ್ಗುಲು ಹೊರಳಿಸಿದ...
ಆದರೂ ಪ್ರಶ್ನೆ ಕೇಳುವ ಮನೋಭಾವ ಅವನನ್ನು ಸುಖವಾಗಿ ನಿದ್ರಿಸಲು ಬಿಡಲಿಲ್ಲ..
ಪುನಃ
ಅವನನ್ನು ತಟ್ಟಿ ಎಬ್ಬಿಸಿತು....
"ಅದೇನೋ ಸರಿ... ಆದರೆ ಎಲ್ಲಾ ನಕ್ಷತ್ರಗಳೂ ಸೂರ್ಯನಂತೆ ಬೆಳಕನ್ನು ಸೂಸಬಲ್ಲವು ತಾನೆ?"
ಅದೇಕೋ
ಪ್ರಶ್ನೆ ಅವನ ಸಮಾಧಾನವನ್ನು ಪೂರ್ತಿ ಕೆಡಿಸಿತು...
ಏನೋ
ತಳಮಳ.... ಏನೋ ತುಮುಲ... ತಲೆ ಕೆರೆದುಕೊಂಡು ಚಾಪೆಯಲ್ಲಿ ಕೂತ...
" ನಕ್ಷತ್ರಗಳು ಸೂರ್ಯನು ಇರಲಿ ಇಲ್ಲದಿರಲಿ ಅನಂತ ವಿಶ್ವದಲ್ಲಿ ಸದಾ ಕಾಲ ಇರುತ್ತವೆ.
ಅವುಗಳಿಂದ
ಬರುವ ಬೆಳಕು ರಾತ್ರಿಯನ್ನು ಹಗಲು ಮಾಡಲು ಸಾಕಾಗುವುದಿಲ್ಲವೇ?"
ಪುನಃ
ತಲೆಗೆ ಬಡಿದುಕೊಂಡ "ಅಯ್ಯೋ!! ಏನಾಗಿದೆ ಇವತ್ತು ನನಗೆ? ಅವುಗಳು ಅಷ್ಟು ದೂರದಲ್ಲಿವೆ.. ಅಷ್ಟು ದೂರದಿಂದ ಇಲ್ಲಿಯವರೆಗೆ ಬೆಳಕು ಬರುವಾಗ ಕ್ಷೀಣ ವಾಗುವುದಿಲ್ಲವೇ? ಅಷ್ಟೂ ಗೊತ್ತಾಗದ ನನ್ನ ತಲೆಗೆ ಇಷ್ಟು ಬೆಂಕಿ ಹಾಕ" ಎಂದುಕೊಂಡು ಮಲಗಿದ ಮತ್ತೊಮ್ಮೆ..
ಆದರೆ
ಅವನ ಮನಸ್ಸು ಮತ್ತೆ ಅವನನ್ನು ಬಡಿದೆಬ್ಬಿಸಿತು.
"
ಏಳಲ್ಲೇ!! ನನಗೆ ಸಮಾಧಾನ ಮಾಡಿಸಿಯೇ ಮಲಗು" ಎಂದು..
"ಪುನಃ ಏನಪ್ಪಾ ಪ್ರಶ್ನೆಗಳ ಗೋಳು ?" ಎಂದು ಪುನಃ ತಲೆ ಚಚ್ಚಿಕೊಂಡು ಯೋಚನೆಗೆ ಕುಳಿತ.
"
ಅಗುವುದಾಗಲಿ .. ಇವತ್ತು ನಾನೋ ಪ್ರಶ್ನೆಗಳೋ ಒಂದು ಕ್ಯೆ ನೋಡಿಯೇ ಬಿಡುತ್ತೇನೆ"
ಎಂದು
ಹೇಳಿ ಮನೆಯ ಒಳಗಿಂದ ಪುಸ್ತಕ ಪೆನ್ನು ದೀಪ ಹಿಡಿದುಕೊಂಡು ಹೊರಗೆ ಚಾಪೆಯ ಮೇಲೆ ಕುಳಿತ...
ಪ್ರಶ್ನೆ
ಗಳ ಸರಮಾಲೆ ಪುನಃ ಸಾಗಿತು.. ಬಾರಿ ಕಾಗದದಲ್ಲಿ ದಾಖಲೂ ಆಗತೊಡಗಿತು...
"
ಏನಪ್ಪಾ? ಮುಂದಿನ ಪ್ರಶ್ನೆ ಏನಪ್ಪಾ ನಿಂದು?" ಎಂದು ತನ್ನ ಮಿದುಳಿನ ಒಳಗೆ ಕೈ ಹಾಕಿ ಕೆರೆಯತೊಡಗಿದ..
"ಎಲ್ಲಾ O.K. ಆದರೆ ದೂರ ಹೆಚ್ಚಾದಂತೆ ಬೆಳಕು ಕ್ಷೀಣ ವಾಗುತ್ತಲ್ಲ? ಯಾಕೆ?"
ಉತ್ತರ
ಅವನಿಗೂ ಗೊತ್ತಿತ್ತು. ದೂರ(Distance(D)) ಹೆಚ್ಚಾದಂತೆ ಬೆಳಕಿನ ತೀಕ್ಷ್ಣತೆ(Intensity(I)) ಅದರ ವಿಲೋಮನುಪಾತ ವರ್ಗ ದಲ್ಲಿ ಕಡಿಮೆ ಯಾಗುತ್ತ ಹೋಗುತ್ತದೆ.....
ಬರೆದ
ಕಾಗದದಲ್ಲಿ.. I=k/(D*D), ಇಲ್ಲಿ K ಒಂದು ಸ್ಥಿರಾಂಕ. D ಹೆಚ್ಚಾದಂತೆ I ಕಡಿಮೆಯಾಗುತ್ತಾ ಹೋಗುತ್ತದೆ.. "ಸರಿ ಯಪ್ಪಾ ... ಅದಕ್ಕೆ ರಾತ್ರಿ ಕತ್ತಲೇನು?" ಪುನಃ ಅವನ ಮಿದುಳು ಕೇಳಿತು.
ಯಾಕೋ
ಓಲ್ಬರನ ಮಿದುಳು ಒಂದು ಅದ್ಭುತ ರಹಸ್ಯದ ಕದ ತಟ್ಟುತ್ತ ಇರುವಂತೆ ಅವನಿಗೆ ಭಾಸವಾಯಿತು.. "ದೂರದಿಂದಾಗಿ ನಕ್ಷತ್ರ ಗಳಿಂದ ಬೆಳಕು ಬರುವುದು ಕಡಿಮೆಯಾಗುತ್ತದೆ.
ಸರಿ...
ಆದರೆ ಎಷ್ಟು ಕಡಿಮೆಯಾಗುತ್ತದೆ ?" "ಎಷ್ಟು?...... ಎಷ್ಟು?....... ಎಷ್ಟು?....."
"
ಅಬ್ಭಾ!!" ಕಿರುಚಿದ ಓಲ್ಬರ ಮಧ್ಯ ರಾತ್ರೆಯಲ್ಲಿ...
"
ವಿಶ್ವದಲ್ಲಿ ಅನಂತ ನಕ್ಷತ್ರಗಳಿವೆ. ಅವುಗಳು ಎಷ್ಟು ದೂರವಾದರೂ ಇರಲಿ. ಅವು ಇದ್ದಲ್ಲಿಯೇ ಇರುತ್ತವೆ! ಅವು ಅನಂತ ಕಾಲದಿಂದ ಅಲ್ಲಿಯೇ ಇವೆ ಮತ್ತು ಇರುತ್ತವೆ. ಆದಿ ಇಲ್ಲದ ಅಂತ್ಯ ಇಲ್ಲದ ವಿಶ್ವ ದಲ್ಲಿ.."
("
ಮೇಲಿನ ಮಾತುಗಳನ್ನು ನಾನಲ್ಲ!! ಓಲ್ಬರ ಹೇಳಿದ್ದು.. ೨ ಶತಮಾನ ಗಳ ಹಿಂದೆ.. ನೆನಪಿಡಿ")
ಎಷ್ಟು
ಕಡಿಮೆಯಾದರೂ ಬೆಳಕು ಬರಲಿ. ಅನಂತ ಸಂಖ್ಯೆಯಿಂದ ಯಾವ ಸಣ್ಣ ಸಂಖ್ಯೆಯನ್ನೂ ಗುಣಿಸಿದರೆ ಆನಂತವೆ ತಾನೆ? ಅದೇ ರೀತಿ ಅನಂತ ನಕ್ಷತ್ರಗಳ ಸಂಖ್ಯೆ ಯನ್ನು ಅತ್ಯಂತ ಅಲ್ಪ ಪ್ರಮಾಣದ ಬೆಳಕಿನ ಜೊತೆಗೆ ಗುಣಿಸಿದರೂ... ಅಬ್ಭ್ಹಾ ಶಿವನೇ!!!
ಬರುವ ಸಂಖ್ಯೆ ಅನಂತ...
ಅಂದರೆ
... ನಮಗೆ ಬರಬೇಕಾಗಿದ್ದ ಬೆಳಕಿನ ಪ್ರಮಾಣ ಅನಂತ...
ಎಲ್ಲಾ
ದಿಕ್ಕಿನಿಂದಲೂ... ಎಲ್ಲ ಸಮಯದಲ್ಲೂ.. ರಾತ್ರಿಗೂ ಹಗಲಿಗೂ ವ್ಯತ್ಯಾಸವೇ ಇಲ್ಲ!!??
ಅಷ್ಟೇ
ಅಲ್ಲ..
ಸೂರ್ಯನಿಗಿಂತಲೂ
ಜಾಸ್ತಿ ಬೆಳಕು... ಸೂರ್ಯನಿಗಿಂತಲೂ ತೀಕ್ಷ್ಣ ಬೆಳಕು.... ಸೂರ್ಯನಿಗಿಂತಲೂ ಹೆಚ್ಚು ಉಷ್ಣತೆ........
ತಲೆ
ಕೆಟ್ಟಿತು ಅವನಿಗೆ... ಮತ್ತೊಮ್ಮೆ ಮಗದೊಮ್ಮೆ ತಾನು ಬರೆದದ್ದನ್ನು ಓದಿದ...
ಒಮ್ಮೆ
ವೇಗವಾಗಿ ಓದಿದ..(ನೀವೂ ಓದಿ ನೋಡಿ.!)
ಅಗೋ
ಅಗೋ ಇಲ್ಲೊಂದು ತಪ್ಪಿದೆ ಅನ್ನುವಾಗ ಅಲ್ಲಿ ತಪ್ಪು ಸಿಗಲಿಲ್ಲ..
ಎಲ್ಲಾಯಿತು
ತಪ್ಪು?.. ತಪ್ಪಂತೂ ಆಗಿದೆ ಎಂದು ಅವನಿಗೆ ಗೊತ್ತಿತ್ತೂ..
ಯಾಕೆಂದರೆ
ಸುತ್ತ ಮುತ್ತಲಿನ ಕತ್ತಲೆ ಅವನನ್ನು ನೋಡಿ ಅಣಕಿಸುತ್ತಿತ್ತು..
ಗಣಿತದಲ್ಲಂತೂ
ದೋಷವಿಲ್ಲ .. ಮತ್ತೆಲ್ಲಾಯಿತು ದೋಷ. ತಪ್ಪೆಲ್ಲಾಯಿತು?
ತಲೆ
ತಲೆ ಚಚ್ಚಿ ಕೊಂಡರೂ ಉತ್ತರ ಬರಲಿಲ್ಲ.
ಈಗ ಸರಳವೆಂದು ತಿಳಿದು ಕೊಂಡಿದ್ದ ಪ್ರಶ್ನೆ ಪೆಡಂಭೂತವಾಗಿ ಬೆಳೆದಿತ್ತು....
ಉಗುಳಲೂ ಆಗದ ನುಂಗಲೂ ಆಗದ ತುತ್ತಾಯಿತು...
"
ಅಷ್ಟು ಪ್ರಮಾಣದ ಬೆಳಕು ಎಲ್ಲಿಗೆ ಹೋಯಿತು?" ತನ್ನೆಲ್ಲ ಜ್ಞಾನವನ್ನು ಉಪಯೋಗಿಸಿ ಪ್ರಶ್ನೆ ಬಿಡಿಸಲೆತ್ನಿಸಿದ.. ಪ್ರಯೋಜನವಾಗಲಿಲ್ಲ..
ಜಗತ್ತಿನ ಹಲವಾರು ಮಹಾನ್ ಮಿದುಳುಗಳು ಪ್ರಶ್ನೆ ಉತ್ತರಕ್ಕಾಗಿ ಹುದುಕಾಡಿದವು.....
ಅವರು
ಕೊಟ್ಟ ಉತ್ತರ ಗಳೇನು?
ಕೊನೆಗೂ
ಓಲ್ಬರನ ಪ್ರಶ್ನೆಗೆ ಉತ್ತರ ಸಿಕ್ಕಿತೆ?
ಓಲ್ಬರನ
ಪ್ರಶ್ನೆ ವಿಶ್ವದ ಆದಿ ಅಂತ್ಯವನ್ನು ಅಳೆದದ್ದು ಹೇಗೆ?
ತಿಳಿಯೋಣ
... ಮತ್ತೂಮ್ಮೆ.. ಖಗೋಳ ದಲ್ಲಿ. ಅಲ್ಲಿಯವರೆಗೂ... ಖಗೋಳಿಯ.. ನಮಸ್ಕಾರ..
For the simple english version click:
http://meethariprasad.googlepages.com/