ಮಂಗಳವಾರ, ಆಗಸ್ಟ್ 26, 2008

ಅಂತರಿಕ್ಷದಲ್ಲಿ "ಅರಮನೆಗಳು"!!??



















ಮನುಷ್ಯ...
ಅಸಾಧ್ಯವನ್ನು ಸಾಧ್ಯ ಮಾಡಲು ಸದಾ ತತ್ಪರ ಪ್ರಾಣಿ.
ಇಂತಹ ಮಾನವನ ಮಂಡೆಯ ಒಳಗೆ ಬಂದದ್ದು ಅಂತರಿಕ್ಷದಲ್ಲಿ ಮನೆ ಕಟ್ಟುವ ವಿಚಾರ..
ಸರಿ ಬಿಡಿ.. ಹೊರಟ ನೋಡಿ ..
ವ್ಯೋಮದಲ್ಲಿ ಅರಮನೆ ಕಟ್ಟಲು!!
ಅರಮನೆಗಳನ್ನು ಅಂತರಿಕ್ಷ ನಿಲ್ದಾಣ ಗಳೆಂದು ಕರೆದ..
೨೦೧೫ನನ್ನೊಂದಿಗೆ ಈ "ತ್ರಿಶಂಕು ಸ್ವರ್ಗಗಳ"..
ಭೂತ..ಭವಿಷ್ಯ..ವರ್ತಮಾನಗಳ ಒಳಗೆ...
ಭೂತ..
ಇದೆಲ್ಲ ಶುರುವಾದದ್ದು ಹೊಟ್ಟೆಕಿಚ್ಚಿನಿಂದ!!??
ಅದು ೧೯೫೦ ರ ಕಾಲ..
ಎರಡನೇ ವಿಶ್ವಯುದ್ದ ಮುಗಿದಿತ್ತು..
ಆದರೆ ಒಂದು ಹೊಸ ಯುದ್ದ ಪ್ರಾರಂಭವಾಗಿತ್ತು..
ಶೀತಲ ಸಮರ..
ಅಮೇರಿಕಾದ "ಗಿಡುಗಕ್ಕೆ" ಸೋವಿಯತ್ತಿನ "ನಾಯಿಗಳ" ಭಯ..
ಸೋವಿಯತ್ತಿನ "ನಾಯಿಗಳಿಗೆ" ಅಮೆರಿಕಾದ "ಗಿದುಗಗಳ" ಮೇಲೆ ಹೊಟ್ಟೆಕಿಚ್ಚು..
ಪರಿಣಾಮ..
ವಿಶ್ವ ಒಳಗೊಳಗೇ ಎರಡು ಬಣಗಳಾಗಿ ಒಡೆದು ಹೋಯಿತು..
ಮಿಲಿಟರಿ,ತಂತ್ರಜ್ಞಾನ, ವಿಜ್ಞಾನ.. ಈ ರೀತಿ ಭೂಮಿಯ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಶುರುವಾಯಿತು..
ಭೂಮಿ ಇವರಿಗೆ ಸಾಕಾಗಲಿಲ್ಲ..
ಅಂತರಿಕ್ಷಕ್ಕೆ ಹಾರಿದರು..
೧೯೫೭, ಅಕ್ಟೋಬರ್ ೪ ರಂದು ಸೋವಿಯತ್ ಹಾರಿಸಿದ "ಸ್ಪುಟ್ನಿಕ್" ಎಂಬ ಪ್ರಥಮ ಉಪಗ್ರಹ ಅಕ್ಷರಶಃ "ವ್ಯೋಮಕ್ಕೆ ಕಿಚ್ಚು" ಹಚ್ಹ್ಚಿಸಿತು..































ಅಲ್ಲಿಂದ ಮುಂದೆ ವ್ಯೋಮದಲ್ಲಿ ಪ್ರಾಬಲ್ಯಕ್ಕಾಗಿ "ಗಿಡುಗ" ಮತ್ತು "ನಾಯಿಗಳ" ನಡುವೆ ಅದ್ಭುತ ಸ್ಪರ್ಧೆ ಶುರುವಾಯಿತು..
"ವ್ಯೋಮಕ್ಕಾಗಿ ಭೂಮಿಯಲ್ಲಿ ಹೋರಾಟ ಶುರುವಾಯಿತು !!!??"
ಪ್ರಥಮ ವ್ಯೋಮಯಾನ ಮುಂತಾದ ದಾಖಲೆಗಳು "ಸೋವಿಯತ್ತಿನ" ಪಾಲಾದರೆ...
ಚಂದ್ರನ ಮೇಲೆ ಪ್ರಥಮ ಮಾನವನನ್ನು ಕಳಿಸಿದ ಕೀರ್ತಿ ಅಮೇರಿಕಾದ ಪಾಲಾಯಿತು...
"(ಚಂದ್ರನ ಮೇಲೆ ಮಾನವ ಹೋಗಿದ್ದು ನಿಜವೇ? ಭೇಟಿ ಕೊಡಿ. ekhagola )
ಆಗ "ಸೋವಿಯತ್ತು" ಅಂತರಿಕ್ಷದಲ್ಲಿ ಮನೆ ಮಾಡುವ ಯೋಜನೆ ಹಾಕಿತು..
ಈಗ ಪ್ರಶ್ನೆ ಏನೆಂದರೆ "ಅಂತರಿಕ್ಷದಲ್ಲಿ ಎಲ್ಲಿ ಮನೆ ಮಾಡುವುದು?"???
ಅಮೇರಿಕಾ ಹೇಳಿತು "ಚಂದ್ರನ ಮೇಲೆ ಮನೆ ಮಾಡೋಣ" ಎಂದು..
ಸೋವಿಯತ್ ಹೇಳಿತು "ಅಷ್ಟು ದೂರದಲ್ಲಿ ಮನೆ ಮಾಡಲು ನಮಗೆ ಆಗೊಲ್ಲಪ್ಪ, ನಾವು ಭೂಮಿಯ ಸುತ್ತ ಸುತ್ತುವ ಕೃತಕ ಉಪಗ್ರಹವನ್ನೇ ಮನೆಯನ್ನಾಗಿ ಬದಲಾಯಿಸುತ್ತೀವೆ" ಎಂದು..
ಹೇಳಿದ್ದು ಮಾತ್ರವಲ್ಲ.. ಪ್ರಥಮ ಅಂತರಿಕ್ಷ ನಿಲ್ದಾಣ ವನ್ನು ೧೯೭೨ ರಲ್ಲಿ ನಿರ್ಮಿಸಿಯೇ ಬಿಟ್ಟಿತು..
ಅದೇ ಜಗತ್ತಿನ ಪ್ರಥಮ ವ್ಯೋಮ ನಿಲ್ದಾಣ "ಸಲ್ಯೂಟ್ ೧"(ಚಿತ್ರ ನೋಡಿ)























ಅಮೇರಿಕಾ ನಾನ್ಏನು ಕಮ್ಮಿ ಎಂದು ಮರುವರ್ಷವೇ ತನ್ನ ಪ್ರಥಮ ವ್ಯೋಮ ನಿಲ್ದಾಣ "sky lab" ಅನ್ನು ೧೯೭೩ ರಲ್ಲಿ ವ್ಯೋಮಕ್ಕೆ ಹಾರಿಸಿತು..(ಚಿತ್ರ ನೋಡಿ)



























"Sky lab" ಹೇಳುವಷ್ಟು ಯಶಸ್ಸನ್ನು ಪಡೆಯಲಿಲ್ಲ..
ಇದರಿಂದ ಅಮೇರಿಕಾ "ನಾವು ಚಂದ್ರನ ಮೇಲೆ ಮನೆ ಕಟ್ಟುತ್ತೇವೆ " ಎಂದು ಯೋಜನೆಗಳ ಮೇಲೆ ಯೋಜನೆ ಹಾಕಲು ಶುರು ಮಾಡಿತು..
ಇತ್ತ "ಸೋವಿಯತ್ತು" ಮಾತ್ರ "ಸಲ್ಯೂಟ್" ಸರಣಿಯಲ್ಲಿ ಹಲವಾರು ವ್ಯೋಮ ನಿಲ್ದಾಣ ಗಳನ್ನೇ ನಿರ್ಮಿಸಿ ಅಪಾರ ಅನುಭವ ಗಳಿಸಿತು..
ಈಗ ಒಂದು ಪ್ರಶ್ನೆ ..
ಅಂತರಿಕ್ಷದಲ್ಲಿ ದೊಡ್ಡ ಮನೆ ಕಟ್ಟುವುದು ಹೇಗೆ ಎಂದು?
ನಾವು ಮಾತನಾಡುತ್ತಿರುವ ಅರಮನೆಗಳು ಭೂಮಿಯ ಸುತ್ತ ೩೫೦ km
ಸರಾಸರಿ ಕಕ್ಷೆಯಲ್ಲಿ ಸುತ್ತುತ್ತಿರುವ ಪರಿವರ್ತಿತ ಕೃತಕ ಉಪಗ್ರಹಗಳು ಎಂಬುವುದನ್ನು ನಾವು ಮರೆಯಬಾರದು..
ದೊಡ್ಡ ಮನೆ ಕಟ್ಟಲು ಅಷ್ಟೆ ದೊಡ್ಡ ಉಪಗ್ರಹ ಕಳಿಸುವುದು ಬಹಳ ಕಷ್ಟದ ಮಾತು,,
ಆದರೆ ಅಡಿಗೆಮನೆ, ಟಾಯ್ಲೆಟ್, ಬಾತ್ರೂಂ ಇವುಗಳನ್ನು ಬೇರೆ ಬೇರೆಯಾಗಿ ಕಳಿಸಿ ಅಂತರಿಕ್ಷದಲ್ಲೇ ಜೋಡಿಸಿದರೆ
ಹೇಗೆ?
ಇದರಿಂದ ಎರಡು ಲಾಭಗಳಿವೆ..
ಮನೆಯನ್ನು ವಿಸ್ತರಿಸಬಹುದು..
ಖರ್ಚು ಮತ್ತು ಅಪಾಯ ಕಡಿಮೆ..
ಇದನ್ನೇ ೧೯೮೩ ರಲ್ಲಿ ಸೋವಿಯತ್ ಮಾಡಿದ್ದು..
ಜಗತ್ತಿನ ಪ್ರಪ್ರಥಮ "ವ್ಯೋಮದಲ್ಲೇ ಜೋಡಿಸಲ್ಪಟ್ಟ" ಬಹು ರೂಮು ಗಳಿರುವ ವ್ಯೋಮ ನಿಲ್ದಾಣ "ಮೀರ್-( ರಷ್ಯನ್ ಭಾಷೆಯಲ್ಲಿ ಶಾಂತಿ) ವ್ಯೋಮದಲ್ಲಿ ಜನ್ಮ ತಾಳಿತು..(ಚಿತ್ರ ನೋಡಿ)
















ಇದರಲ್ಲಿ ವರ್ಷಗಟ್ಟಲೆ ವ್ಯೋಮಯಾನಿ ಗಳಿದ್ದು ದಾಖಲೆ ಬರೆದರು..
ಅಷ್ಟು ಹೊತ್ತಿಗೆ ೧೯೯೧ ರ ಸುಮಾರಿಗೆ ಸೋವಿಯತ್ತು ಒಡೆದು ಪುಡಿ ಪುಡಿ ಯಾಗಿ ಹೋಯಿತು..
ಆಗ ಒಂದು ವಿಚಿತ್ರ ಪರಿಸ್ತಿತಿ ಬಂತು..
ಅತ್ತ ಅಮೇರಿಕಾ ಚಂದ್ರನ ಮೇಲೆ ಒಂದು ಟಾಯ್ಲೆಟ್ ಕಟ್ಟುವುದೂ ಕಷ್ಟ ಎಂದು ಮನಗಂಡಿತು..
ಇತ್ತ ಸೋವಿಯತ್ತಿನ ಬಳಿ ಇದ್ದ "Mir" ನಿಭಾಯಿಸಲೂ ಹಣವಿರಲಿಲ್ಲ..
ಅತ್ತ ಅಮೆರಿಕಾದ ಬಳಿ ಹಣವಿತ್ತು.. ಅನುಭವ ವಿರಲಿಲ್ಲ..
ರಷ್ಯದ ಬಳಿ ಹಣವಿರಲಿಲ್ಲ .. ಅನುಭವವಿತ್ತು..
ಇಬ್ಬರಿಗೂ ಅಂತರಿಕ್ಷದಲ್ಲಿ ಹೊಸ ವ್ಯೋಮ ನಿಲ್ದಾಣ ನಿರ್ಮಿಸುವ ಅಗತ್ಯವಿತ್ತು..
ಹಣ ಮತ್ತು ಅನುಭವ ಒಂದಾಗುವ "ಶುಭ ಕಾಲ" ಬಂದಿತ್ತು..
ವಿಶ್ವದ ಹದಿನಾರು ರಾಷ್ಟ್ರ ಗಳು ಒಂದಾಗಿ ವ್ಯೋಮದಲ್ಲಿ "ನ ಭೂತೋ" ಎಂಬಂತಹ ಅರಮನೆ ಕಟ್ಟಲು ಸಜ್ಜಾದವು..
ಇದರ ಫಲ ಸ್ವರೂಪವೇ "ಅಂತರ ರಾಷ್ಟ್ರೀಯ ಅಂತರಿಕ್ಷ ನಿಲ್ದಾಣ" ವ್ಯೋಮದಲ್ಲಿ ಜನ್ಮ ತಾಳಲು ಆರಂಭಿಸಿತು. ೩೫೦ km ದೂರ ದಲ್ಲಿ ಅದ್ಭುತ ಅಂತರಿಕ್ಷ ನಿಲ್ದಾಣದ ನಿರ್ಮಾಣ ಭರದಿಂದ ಸಾಗಿದೆ. ೨೦೧೫ರಲ್ಲಿ ಈ ಕಾರ್ಯ ಮುಗಿಯುವ ಸಾಧ್ಯತೆ ಇದೆ (ಚಿತ್ರ ನೋಡಿ).