ಶನಿವಾರ, ಮೇ 26, 2012

ರಂಗೋಲಿ - 1


ಈ ಲೇಖನಗಳು ಖಗೋಳ.blogspot .com ನ  ಸೊತ್ತು . ಇವನ್ನು ಅನುಮತಿಯಿಲ್ಲದೆ ಬಳಸುವುದು ಕಾನೂನು ಬಾಹಿರ . (ಕ)

ಈ ಲೇಖನ ಮಾಲೆ ಸಾಲಿಗ್ರಾಮದ ಹವ್ಯಾಸಿ ಖಗೋಳಿ   ಪ.ವೆ.ಉಪಾಧ್ಯಾಯರವರ ಪರಿಶ್ರಮದ  ಫಲ . ಇದನ್ನು ಅಂತರ್ಜಾಲ ರೂಪ ಕ್ಕೆ ತರುವ ನನ್ನ ಬಹುವರ್ಷಗಳ  ಕನಸಿಗೆ ಸಹಾಯ ಮಾಡಿದವರು ಉಡುಪಿ,ಕಲ್ಯಾಣಪುರ ಮಿಲಾಗ್ರೆಸ್ ಕಾಲೇಜು, ಕಾಲೇಜಿನ  ಭೌತಶಾಸ್ತ್ರ ವಿಭಾಗ  ಮತ್ತು ಅಲ್ಲಿನ ವಿದ್ಯಾರ್ಥಿ  ಮಿತ್ರ ಸುಜಿತ್.


ಈ ಲೇಖನಗಳನ್ನು   ಪ.ವೆ.ಉಪಾಧ್ಯಾಯರವರ  ಅನುಮತಿ ಪಡೆದು ಪ್ರಕಟಿಸಲಾಗಿದೆ.

ಧನ್ಯವಾದಗಳು .
ಹರಿ ಪ್ರಸಾದ.(ಖಗೋಳಿ )

ರಂಗೋಲಿ 

ವಿರಳ ಖಗೋಲ ಘಟನೆಯೊಂದರಿಂದ ಆಕರ್ಷಿತನಾಗಿ ಕಳೆದ ಹಲವಾರು ವರ್ಷಗಳಿಂದ ಅನಗತ್ಯವಾಗಿ ಖಗೋಲ ಶಾಸ್ತ್ರದಲ್ಲಿ ಮುಳುಗಿರುವ ನಾನು ಖಗೋಲದ ಕುರಿತು ಏನೇನು ತಿಳಿದುಕೊಂಡೆನೋ ಅದನ್ನಿಲ್ಲಿ ನನ್ನದೇ ಚಿತ್ರಗಳೊಂದಿಗೆ ಬರೆದಿರುವೆನು.
ನೀವೇನು  ತಿಳಿದುಕೊಂಡಿದ್ದಿರೋ ಅದನ್ನಿದರೋಟ್ಟಿಗೆ ಹೋಲಿಸಬಹುದು. ಇಲ್ಲಿ ಬರೆದಿರುವುದೆಲ್ಲ ಸತ್ಯವೆಂದಾಗಲೀ ಸುಳ್ಳೆಂದಾಗಲೀ ನಾನು ಹೇಳುವುದಿಲ್ಲ. ನನ್ನ ತಿಳಿವಿಗೆ ತೀವ್ರ ವಿರುದ್ಧವಾದ ಸತ್ಯವಿರುವವುಗಳ ಕುರಿತು ಅಲ್ಲಲ್ಲೇ ತಿಳಿಸಿರುವೇನು


ಖಗೋಳ : CELESTIAL SPHERE : ಚಂದ್ರನಿಲ್ಲದ ರಾತ್ರಿಯಲ್ಲಿ ಆಕಾಶದೆಡೆಗೆ  ನೋಡುವಾಗ ಅರ್ಧಗೋಲಾಕಾರದ ಬ್ರಹತ್ ಗುಮ್ಮಟವೊಂದನ್ನು ಭೂಮಿಯ ಮೇಲೆ ದಿಗಂತದಾಚೆಯವರೆಗೂ ಮುಚ್ಚಿದಂತಿದ್ದು ಆ ಗುಮ್ಮಟದ ಮೈ ತುಂಬಾ ಅಲ್ಲಲ್ಲಿ ತೂತಾಗಿದ್ದು ಗುಮ್ಮಟದ ಆಚೆ ಇರಬಹುದಾದ ಬೆಳಕು ಸೋರುವಂತೆ ಕಾಣುವ ಬೆಳಕಿನ ಚುಕ್ಕಿಗಳನ್ನು ಕಾಣುತ್ತೇವೆ ಸಹಜವಾಗಿಯೇ ಅವುಗಳನ್ನು ತಾರೆಗಳು ಎಂದು ತಿಳಿಯುತ್ತೇವೆ. ವಾಸ್ತವವಾಗಿ ಈ ತಾರೆಗಳು ಆಕಾಶದ ಹರಿವಿನಲ್ಲಿ ಬೇರೆ ಬೇರೆ ಆಳ ದೂರದಲ್ಲಿ ಚದುರಿಕೊಂಡಿದ್ದರೂ ಅವುಗಳೆಲ್ಲ ಒಂದೇ ದೂರದಲ್ಲಿ ಗುಮ್ಮಟವೊಂದಕ್ಕೆ ಅಂಟಿಕೊಂಡಿರುವಂತೆ ಕಾಣುವ ನೋಟವೇ ಖಗೋಲ, CELESTIAL SPHERE.

ದಿಗಂತ:HORIZON:  ವೀಕ್ಷಕನ ಸುತ್ತಲಿನ ನೆಲ ಮತ್ತು ಖಗೋಲ ಗುಮ್ಮಟದ ಅಂಚು ಸೇರುವಲ್ಲಿ ಗರಿಷ್ಟಗಾತ್ರದ ಮಹಾವ್ರತ್ತವೊಂದನ್ನು ಕಲ್ಪಿಸಿಕೊಂಡರೆ 
ಅದುವೇ ದಿಗಂತ, ಹಾರಿಜ ಕ್ಷಿತಿಜ, HORIZON. ದಿಗಂತವು ಇಡೀ ಖಗೋಲದ ಸುಮಾರು ಅರ್ಧಾಂಶ ಭಾಗವನ್ನು ಸದಾ ಅಗೋಚರವನ್ನಾಗಿರಿಸುತ್ತದೆ. ವಿಕ್ಷಕನೇ ಈ ದಿಗಂತ ಮಹಾವ್ರತ್ತದ ಕೇಂದ್ರಬಿಂದು. ಈ ಮಹಾವ್ರತ್ತದತಲವು [PLANE OF HORIZON]
ಗೋಲಾಕಾರದ ಭೂಮಿಯ ಮೈಗೆ ಸ್ಪರ್ಶರೇಖೆಯನ್ನುಂಟುಮಾಡಿದೆ [TANGENTIAL].
ಮತ್ತು ಲಂಬಸೂತ್ರಕ್ಕೆ [PLUMB] 90º  ಕೋನವನ್ನುಂಟುಮಾಡಿದೆ. ದಿಗಂತವು ವೀಕ್ಷಕನ ಅಕ್ಷಾಂಶ ರೇಕಾಂಶ ಮತ್ತು ಎತ್ತರ  [ALTITUDE] ವನ್ನನುಸರಿಸಿ ದಿಗಂತದಿಂದ ಮೇಲೆದ್ದಿರುತ್ತದೆ [ಕೆಳಗೂ].
ಈ ಧ್ರುವತಾರೆಯ ಪಕ್ಕದಲ್ಲಿರುವ ಖಗೋಲ ಧ್ರುವ [CELESTIAL POLE] ದಿಂದ ಹತ್ತಿರದ ದಿಗಂತದಲ್ಲಿ 90º ಕೋನವುಂಟಾಗುವಂತೆ ಕಾಲ್ಪನಿಕ ಗೆರೆಯೊಂದನ್ನೆಳೆಯಬೇಕು. ಈ ಗೆರೆ ದಿಗಂತದಲ್ಲಿ ಸ್ಪರ್ಶಿಸುವ ಬಿಂದುವೇ ಉತ್ತರಬಿಂದು. ಉತ್ತರಬಿಂದುವಿಗೆ ಮುಖ ಮಾಡಿ ನಿಂತಿರುವ ವೀಕ್ಷಕ 90º ಕೋನ ಬಲಕ್ಕೆ ತಿರುಗಿದರೆ ಪಶ್ಚಿಮ. ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಈ ನಾಲ್ಕು ಪ್ರಧಾನ ಬಿಂದುಗಳನ್ನು CARDINAL POINTS ಎನ್ನುವರು.

.
ಶಿರೋಬಿಂದು: ZENITH: ವೀಕ್ಷಕನ ಪೂರ್ವ ಪಶ್ಚಿಮ ಮತ್ತು ಉತ್ತರ ದಕ್ಷಿಣ ಬಿಂದುಗಳಿಂದ ದಿಗಂತದಲ್ಲಿ 90º ಕೋನವುಂಟಾಗುವಂತೆ ಒಂದೊಂದು  ಗೆರೆಗಳನ್ನು ದಿಗಂತದಿಂದ ಖಗೋಲಕ್ಕೆ ಮೇಲೆತ್ತಬೇಕು.
ಈ ನಾಲ್ಕು ಗೆರೆಗಳು ಸಂಗಮಿಸುವ ಕೇಂದ್ರವು ಈತನ ಶಿರೋಬಿಂದು, ಖಮಧ್ಯ, ZENITH.
ಇದು ಪ್ರತಿಯೊಬ್ಬ ವೀಕ್ಷಕನ ನೆತ್ತಿಯ ನೇರ ಮೇಲಕ್ಕಿರುವುದು.
ಶಿರೋಬಿಂದುವಿನಿಂದ ದಿಗಂತ ಮಹಾವ್ರತ್ತದ ಕೇಂದ್ರಬಿಂದುವಿನ [ವೀಕ್ಷಕನ] ಮುಲಕ ಭೂಮೈಯನ್ನು ತೂರಿಕೊಂಡು ಕೆಳಗಿನ ಅಗೋಚರ ಖಗೋಲವನ್ನು ಸೇರುವಂತೆ ಗೆರೆಯೊಂದನ್ನು ಕಲ್ಪಿಸಿಕೊಂಡರೆ ಈ ಗೆರೆ ಕೆಳಗಿನ ಅಗೋಚರ ಖಗೋಲದಲ್ಲಿ ಐಕ್ಯವಾಗುವ ಬಿಂದುವು ಅಧೋಬಿಂದು, NADIR.
ಉತ್ತರ ಬಿಂದುವಿನಿಂದ ಶಿರೊಬಿಂದುವಿನ ಮುಲಕ ದಕ್ಷಿಣ ಬಿಂದುವನ್ನು ತಲುಪುವ ಗೆರೆಯೊಂದನ್ನು ಕಲ್ಪಿಸಿಕೊಂಡರೆ ಅದುವೇ ವೀಕ್ಷಕನ ಮಧ್ಯಾಹ್ನ ರೇಖೆ OBSERVER'S MERIDIAN LINE.


ವಿಷುವದ್ ವೃತ್ತ : CELESTIAL EQUATOR: ಭೂಮಿ  ಗೋಲಾಕಾರದಲ್ಲಿದ್ದು  ಸದಾ ಉರುಳುತ್ತಿರುತ್ತದೆ. ಇದುವೇ  ಭೂಮಿಯ ದೈನಂದಿನ ಚಲನೆ [ಆವರ್ತನೆ. ಆಕ್ಷಿಕ ತಿರುವು. AXIAL ROTATION]. ಈ ಉರುಳುವಿಕೆಗೊಂದು [ಕಾಲ್ಪನಿಕ ] ಅಕ್ಷವಿರುವುದು [AXIS]. ಅಕ್ಷದ ಎರಡು ತುದಿಗಳೇ  ಉತ್ತರಧ್ರುವ ಮತ್ತು ದಕ್ಷಿಣಧ್ರುವಗಳು. ಈ ಎರಡು ತುದಿಗಳನ್ನು ಖಗೋಳಕ್ಕೆ ವಿಸ್ತರಿಸಿದರೆ ಇವು ಖಗೋಳದಲ್ಲಿ ಐಕ್ಯವಾಗುವ  ಬಿಂದುಗಳೇ ಖಗೋಳ ಧ್ರುವಗಳು,CELESTIAL POLES.ಭೂಮಿಯ ಸಮಭಾಜಕವೃತ್ತದ ತಲವನ್ನು [PLANE OF EQUATOR] ಖಗೋಳಕ್ಕೆ ವಿಸ್ತರಿಸಿದರೆ ಅದುವೇ ಖಗೋಳ ಸಮದ್ವಿಭಾಜಕವೃತ್ತ, ವಿಷುವದ್ ವೃತ್ತ   CELESTIAL EQUATOR. [ಚಿತ್ರ 7F]. ಇದು ವೀಕ್ಷಕನ ಅಕ್ಷಾಂಶ [LATITUDE] ವನ್ನನುಸರಿಸಿ ದಿಗಂತದೆಡೆಗೆ ವಾಲಿಕೊಂಡಿರುತ್ತದೆ. ಅಂದರೆ ಭೂಮಿಯ ಉತ್ತರಾರ್ಧಗೋಳದ ವೀಕ್ಷಕರಿಗೆ ದಕ್ಷಿಣ ದಿಗಂತದೆಡೆಗೂ ಮತ್ತು ದಕ್ಷಿಣಾರ್ಧಗೋಳದ ವೀಕ್ಷಕರಿಗೆ ಉತ್ತರ ದಿಗಂತದೆಡೆಗೂ ವಾಲಿರುತ್ತದೆ.  

 

ವಿಷುವದ್ ಬಿಂದುಗಳು:  EQUINOCTIAL POINTS: ವಿಷುವದ್ ವ್ರತ್ತದ  ಮೇಲೆ ವ್ಯಾಸೀಯ ವಿರುದ್ಧ ದಿಕ್ಕುಗಳಲ್ಲಿರುವ ಎರಡು ಬಿಂದುಗಳು. (ಚಿತ್ರ ಸಹಿತ  ಲೇಖನ ಮುಂದಿನ ಚಿತ್ರ 7G ಪುಟ 25 26 ರಲ್ಲಿ ಬರಲಿದೆ ).


ಕ್ರಾಂತಿವ್ರತ್ತ: ECLIPTIC :    ಭೂಮಿ ದೈನಂದಿನ ಚಲನೆಯೊಂದಿಗೆ, ಅಂದರೆ ಆವರ್ತನೆಯೊಂದಿಗೆ ಸೂರ್ಯನನ್ನು ಕೇಂದ್ರವಾಗಿಸಿಕೊಂಡು ಸೂರ್ಯನ ಸುತ್ತಾ ಓಡುತ್ತಿರುತ್ತದೆ. ಇದುವೇ ಭೂಮಿಯ ಕಕ್ಷಾ ಚಲನೆ [ORBITAL MOTION OF EARTH] ಈ ಕಕ್ಷಾ ಚಲನೆಯ ದಾರಿಯೇ ಕಾಂತಿವ್ರತ್ತ [ECLIPTIC]. ಕಾಂತಿವ್ರತ್ತವು ವಿಷುವದ್ ವ್ರತ್ತಕ್ಕೆ 23.449º ಕೋನ ಉತ್ತರ ದಕ್ಷಿಣವಾಗಿ ವಾಲಿಕೊಂಡಿರುತ್ತದೆ. ಕ್ರಾಂತಿವ್ರತ್ತದಿಂದ ಉತ್ತರಕ್ಕೆ ಮತ್ತು ದಕ್ಷಿಣಕ್ಕೆ 9 + 9 = 18º ಕೋನ ಅಗಲದ ದಾರಿಯಲ್ಲಿ ಸೂರ್ಯಪರಿವಾರದ ಬಹುಪಾಲು ಕಾಯಗಳು ಭೂಮಿಯೋಟ್ಟಿಗೆ ಬೇರೆ ಬೇರೆ ವೇಗದಲ್ಲಿ ಬೇರೆ ಬೇರೆ ದೂರಗಳಲ್ಲಿ ಸೂರ್ಯನಿಗೆ ಸುತ್ತುತ್ತಿರುತ್ತವೆ. ಈ 18º  ಕೋನ ಅಗಲದ ದಾರಿಯೇ ರಾಶಿಚಕ್ರ, ZODIAC BELT, ZODIAC BAND.ರಾಶಿಚಕ್ರದ ಮೇಲೆ ಉದ್ದಕ್ಕೆ ಹರಡಿಕೊಂಡಿರುವ ತಾರಾ ಪುಂಜಗಳೆ ರಾಶಿಪುಂಜಗಳು, ZODIAC CONSTELLATION.


ಆಯನ:  SOLSTICE: ಭೂಮಿಯ ಸಮಭಾಜಕವ್ರತ್ತದ ತಲ ಮತ್ತು ಕ್ರಾಂತಿವ್ರತ್ತದ ತಲ ಇವೆರಡೂ ಒಂದರೊಳಗೊಂದು ಐಕ್ಯವಾಗಿಲ್ಲದ [23.45º ವಾಲಿಕೊಂಡಿದೆ] ಕಾರಣದಿಂದಾಗಿ ದಿಗಂತದಲ್ಲಿ ಸೂರ್ಯ ಉದಯಾಸ್ತಗಳ ಸ್ಥಾನ ಸ್ಥಿರವಾಗಿದೆ ಉತ್ತರ ದಕ್ಷಿಣವಾಗಿ ಬದಲಾಗುತ್ತಿರುತ್ತದೆ.
ಡಿಸೆಂಬರ್ 22 ರಂದು ಭೂಮಧ್ಯೆರೇಖೆಯಿಂದ ಸುಮಾರು 23.5º ದಕ್ಷಿಣದಲ್ಲಿ ಮತ್ತು ಜೂನ್ 21 ರಂದು ಭೂಮಧ್ಯರೇಖೆಯಿಂದ ಸುಮಾರು 23.5º ಡಿಗ್ರಿ ಉತ್ತರದಲ್ಲೂ ಸೂರ್ಯ ಉದಯಾಸ್ತಗಳಾಗುತ್ತವೆ  [ಚಿತ್ರ ಸಹಿತ  ಲೇಖನ ಮುಂದಿನ ಪುಟ 17 ಚಿತ್ರ 7E A ರಲ್ಲಿ ಬರಲಿದೆ ]. ಕ್ರಾಂತಿವ್ರತ್ತದಲ್ಲಿ ಡಿಸೆಂಬರ್ 22 ರ ಸೂರ್ಯನ ಸ್ಥಾನ ಬಿಂದುವಿಗೆ ದಕ್ಷಿಣಾಯಾನಬಿಂದು [ದಕ್ಷಿಣಾಯನಾಂತ್ಯಬಿಂದು]
ಮತ್ತು ಜೂನ್ 21 ರ ಸೂರ್ಯನ ಸ್ಥಾನ ಬಿಂದುವಿಗೆ ಉತ್ತರಾಯಣಬಿಂದು [ಉತ್ತರಾಯನಾಂತ್ಯಬಿಂದು] ಎಂಬುದಾಗಿ ಕರೆಯಲ್ಪಡುತ್ತದೆ. ರಾಶಿ ಪುಂಜ ಮಿಥುನದಲ್ಲಿ ಉತ್ತರಾಯನಾಂತ್ಯ ಬಿಂದು ಮತ್ತು ರಾಶಿ ಪುಂಜ ಧನುವಿನಲ್ಲಿ ದಕ್ಷಿಣಾಯನಾಂತ್ಯ ಬಿಂದುಗಳಿರುವುದನ್ನು SKY ATLAS ನಲ್ಲಿ  ಗುರುತಿಸಬಹುದು.







 
 
ಚಿತ್ರ 1: ಭೂಮಿಯಿಂದ ಹೊರಗೆ ಉತ್ತರ ದಿಕ್ಕಿನಲ್ಲಿ ಬಾಹ್ಯಾಕಾಶದಲ್ಲಿ ನಿಂತು ದಕ್ಷಿಣಕ್ಕೆ ಮುಖ ಮಾಡಿ ಸೂರ್ಯ ಎಡ ಬದಿಗೆ ಇರುವುದನ್ನು
ಕಲ್ಪಿಸಿಕೊಳ್ಳುವುದು. ಭೂಮಿಯ ದೈನಂದಿನ ಚಲನೆಯಾದ ಉದಯಾಸ್ತಗಳಿಗೆ ಕಾರಣವಾಗುವ ಆವರ್ತನೆಯನ್ನು [AXIAL ROTATION] ಆಧರಿಸಿ ದಿಕ್ಕುಗಳನ್ನು ಗುರುತಿಸುವುದು. ಭೂಮಿಯನ್ನೊಂದು ಗಡಿಯಾರದ ಮುಖ ಎಂಬುದಾಗಿ ಕಲ್ಪಿಸಿಕೊಂಡರೆ ಅದರಲ್ಲಿನ ಅಂಕೆಗಳ ಹಂಚಿಕೆಯ ಕ್ರಮದ ದಿಕ್ಕು ಪೂರ್ವದಿಂದ ಪಶ್ಚಿಮಕ್ಕೆ. ಮತ್ತು ಹಾಗೆ ಹಂಚಿಕೆಯ ಕ್ರಮದ ವಿರುದ್ಧ  ದಿಕ್ಕು ಪಶ್ಚಿಮದಿಂದ ಪೂರ್ವಕ್ಕೆ ಎಂಬುಉದಾಗಿ ತಿಳಿಯಬೇಕು. ಹಾಗೆ ಭೂಮಿಯ ಆವರ್ತನೆಯು ಸದಾ ಪೂರ್ವದಿಕ್ಕಿಗೇ [ANTICLOCKWISE] ಇರುದನ್ನು ಈ ಚಿತ್ರವೂ ತೋರಿಸುತ್ತದೆ. E= ಪೂರ್ವ, W=ಪಶ್ಚಿಮ, EH=ಪೂರ್ವ ದಿಗಂತ, WH=ಪಶ್ಚಿಮ ದಿಗಂತ, MN=ಮಧ್ಯರಾತ್ರಿ, MD=ಮಧ್ಯಾಹ್ನ, ET=ಮುಸ್ಸಂಜೆ, MT=ಮುಂಜಾನೆ, NP=ಉತ್ತರ ಧ್ರುವ.

ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ ...

ಮಂಗಳವಾರ, ಮೇ 5, 2009

ರಾತ್ರಿ ಕತ್ತಲಿನ ರಹಸ್ಯ!!


ಎರಡು ಶತಮಾನಗಳ ಹಿಂದಿನ ಕಥೆ ಇದು.. ಜರ್ಮನಿ ಯಲ್ಲಿ ಓಲ್ಬರ್ ಎಂಬ ವಿಜ್ಞಾನಿ ಇದ್ದ..
ಖಗೋಳ
, ತಾರೆಗಳು ಇವುಗಳ ಬಗ್ಗೆ ಮಹಾ ಆಸಕ್ತಿ ಇದ್ದ ಅಧ್ಭುತ ವ್ಯಕ್ತಿ...
ಒಮ್ಮೆ
ರಾತ್ರಿ ಅನಂತ ಆಕಾಶವನ್ನು ನೋಡುತ್ತಾ ಒಂದು ಪ್ರಶ್ನೆಯನ್ನು ತನಗೆ ತಾನೆ ಕೇಳಿಕೊಂಡ...
ರಾತ್ರಿಯೂ
ಯಾಕೆ ಹಗಲ ಹಾಗಿಲ್ಲ?
ಪುನಃ
ತನ್ನ ಯೋಚನೆಗೆ ತಾನೇ ನಕ್ಕ..
ಆದರೆ
ಅವನ ಒಳಗಿನ ವಿಜ್ಞಾನಿ ಅವನನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡಲಿಲ್ಲ..
ಆ ಪ್ರಶ್ನೆಯನ್ನು ಕೆದಕಲು ಕೂತ..
ಅವನ
ಯೋಚನಾ ಲಹರಿ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತ ಹೀಗೆ ಸಾಗಿತು...
ಅಂದ
ಹಾಗೆ ರಾತ್ರಿ ಯಾಕೆ ಕತ್ತಲು ಇಲ್ಲ? ಆ ರಾತ್ರಿ ಮನೆ ಹೊರಗೆ ಚಾಪೆ ಹಾಸಿಕೊಂಡು ಚಂದ್ರನಿಲ್ಲದ ಆಗಸವನ್ನು ನೋಡುತ್ತಾ ಯೋಚಿಸಲು ಪ್ರಾರಂಭಿಸಿದ..
ಉತ್ತರ
ಸರಳ..ಸೂರ್ಯ ಇಲ್ಲ..
ಅಂದರೆ
ಎಲ್ಲಿರುತ್ತಾನೆ?
ಅವನು
ಇದ್ದಲ್ಲೇ!!?? ಇರುತ್ತಾನೆ..
(
ತನ್ನ ತಾಯಿ ಬ್ರಹ್ಮಾಂಡ ಹಾಲು ಹಾದಿ ಯ ಕೇಂದ್ರಕ್ಕೆ ಸುತ್ತು ಬರುತ್ತಿರುತ್ತಾನೆ ಎಂಬುವುದು ಬೇರೆ ವಿಷಯ ಬಿಡಿ.).
ಆದರೆ
ಭೂಮಿ ಸೂರ್ಯನ ಸುತ್ತ ಮಾತ್ರ ಸುತ್ತುತ್ತಿಲ್ಲ.
ತನ್ನ
ಸುತ್ತಲೂ ತಾನು ವಾಲಿಕೊಂಡು ಬುಗುರಿಯಂತೆ ತಿರುಗುತ್ತಿದೆ.
ಯಾವಾಗ
ಭೂ ತಾಯಿ ತನ್ನ ಒಂದು ಭಾಗವನ್ನು ಸೂರ್ಯನ ಹೊಂಗಿರಣಗಳಿಗೆ ಒಡ್ಡಿ ಇರುತ್ತಾಳೋ ಆಗಲೇ ಭೂಮಿಯ ಮತ್ತೊಂದು ಭಾಗದಲ್ಲಿ ಜೀವ ಕೋಟಿ ಕತ್ತಲೆಯ ಸೆರಗಲ್ಲಿ ಮುಳುಗಿರುತ್ತದೆ...
"ಸಮಾಧಾನ ವಾಯಿತು ತಾನೆ?" ತನಗೆ ತಾನೆ ಹೇಳಿಕೊಂಡು ಮಗ್ಗುಲು ಹೊರಳಿಸಿದ...
ಆದರೂ ಈ ಪ್ರಶ್ನೆ ಕೇಳುವ ಮನೋಭಾವ ಅವನನ್ನು ಸುಖವಾಗಿ ನಿದ್ರಿಸಲು ಬಿಡಲಿಲ್ಲ..
ಪುನಃ
ಅವನನ್ನು ತಟ್ಟಿ ಎಬ್ಬಿಸಿತು....
"ಅದೇನೋ ಸರಿ... ಆದರೆ ಎಲ್ಲಾ ನಕ್ಷತ್ರಗಳೂ ಸೂರ್ಯನಂತೆ ಬೆಳಕನ್ನು ಸೂಸಬಲ್ಲವು ತಾನೆ?"
ಅದೇಕೋ
ಈ ಪ್ರಶ್ನೆ ಅವನ ಸಮಾಧಾನವನ್ನು ಪೂರ್ತಿ ಕೆಡಿಸಿತು...
ಏನೋ
ತಳಮಳ.... ಏನೋ ತುಮುಲ... ತಲೆ ಕೆರೆದುಕೊಂಡು ಚಾಪೆಯಲ್ಲಿ ಕೂತ...
"ಆ ನಕ್ಷತ್ರಗಳು ಸೂರ್ಯನು ಇರಲಿ ಇಲ್ಲದಿರಲಿ ಈ ಅನಂತ ವಿಶ್ವದಲ್ಲಿ ಸದಾ ಕಾಲ ಇರುತ್ತವೆ.
ಅವುಗಳಿಂದ
ಬರುವ ಬೆಳಕು ರಾತ್ರಿಯನ್ನು ಹಗಲು ಮಾಡಲು ಸಾಕಾಗುವುದಿಲ್ಲವೇ?"
ಪುನಃ
ತಲೆಗೆ ಬಡಿದುಕೊಂಡ "ಅಯ್ಯೋ!! ಏನಾಗಿದೆ ಇವತ್ತು ನನಗೆ? ಅವುಗಳು ಅಷ್ಟು ದೂರದಲ್ಲಿವೆ.. ಅಷ್ಟು ದೂರದಿಂದ ಇಲ್ಲಿಯವರೆಗೆ ಬೆಳಕು ಬರುವಾಗ ಕ್ಷೀಣ ವಾಗುವುದಿಲ್ಲವೇ? ಅಷ್ಟೂ ಗೊತ್ತಾಗದ ನನ್ನ ತಲೆಗೆ ಇಷ್ಟು ಬೆಂಕಿ ಹಾಕ" ಎಂದುಕೊಂಡು ಮಲಗಿದ ಮತ್ತೊಮ್ಮೆ..
ಆದರೆ
ಅವನ ಮನಸ್ಸು ಮತ್ತೆ ಅವನನ್ನು ಬಡಿದೆಬ್ಬಿಸಿತು.
"
ಏಳಲ್ಲೇ!! ನನಗೆ ಸಮಾಧಾನ ಮಾಡಿಸಿಯೇ ಮಲಗು" ಎಂದು..
"ಪುನಃ ಏನಪ್ಪಾ ಈ ಪ್ರಶ್ನೆಗಳ ಗೋಳು ?" ಎಂದು ಪುನಃ ತಲೆ ಚಚ್ಚಿಕೊಂಡು ಯೋಚನೆಗೆ ಕುಳಿತ.
"
ಅಗುವುದಾಗಲಿ .. ಇವತ್ತು ನಾನೋ ಈ ಪ್ರಶ್ನೆಗಳೋ ಒಂದು ಕ್ಯೆ ನೋಡಿಯೇ ಬಿಡುತ್ತೇನೆ"
ಎಂದು
ಹೇಳಿ ಮನೆಯ ಒಳಗಿಂದ ಪುಸ್ತಕ ಪೆನ್ನು ದೀಪ ಹಿಡಿದುಕೊಂಡು ಹೊರಗೆ ಚಾಪೆಯ ಮೇಲೆ ಕುಳಿತ...
ಪ್ರಶ್ನೆ
ಗಳ ಸರಮಾಲೆ ಪುನಃ ಸಾಗಿತು.. ಈ ಬಾರಿ ಕಾಗದದಲ್ಲಿ ದಾಖಲೂ ಆಗತೊಡಗಿತು...
"
ಏನಪ್ಪಾ? ಮುಂದಿನ ಪ್ರಶ್ನೆ ಏನಪ್ಪಾ ನಿಂದು?" ಎಂದು ತನ್ನ ಮಿದುಳಿನ ಒಳಗೆ ಕೈ ಹಾಕಿ ಕೆರೆಯತೊಡಗಿದ..
"ಎಲ್ಲಾ O.K. ಆದರೆ ದೂರ ಹೆಚ್ಚಾದಂತೆ ಬೆಳಕು ಕ್ಷೀಣ ವಾಗುತ್ತಲ್ಲ? ಯಾಕೆ?"
ಉತ್ತರ
ಅವನಿಗೂ ಗೊತ್ತಿತ್ತು. ದೂರ(Distance(D)) ಹೆಚ್ಚಾದಂತೆ ಬೆಳಕಿನ ತೀಕ್ಷ್ಣತೆ(Intensity(I)) ಅದರ ವಿಲೋಮನುಪಾತ ದ ವರ್ಗ ದಲ್ಲಿ ಕಡಿಮೆ ಯಾಗುತ್ತ ಹೋಗುತ್ತದೆ.....
ಬರೆದ
ಕಾಗದದಲ್ಲಿ.. I=k/(D*D), ಇಲ್ಲಿ K ಒಂದು ಸ್ಥಿರಾಂಕ. D ಹೆಚ್ಚಾದಂತೆ I ಕಡಿಮೆಯಾಗುತ್ತಾ ಹೋಗುತ್ತದೆ.. "ಸರಿ ಯಪ್ಪಾ ... ಅದಕ್ಕೆ ರಾತ್ರಿ ಕತ್ತಲೇನು?" ಪುನಃ ಅವನ ಮಿದುಳು ಕೇಳಿತು.
ಯಾಕೋ
ಓಲ್ಬರನ ಮಿದುಳು ಒಂದು ಅದ್ಭುತ ರಹಸ್ಯದ ಕದ ತಟ್ಟುತ್ತ ಇರುವಂತೆ ಅವನಿಗೆ ಭಾಸವಾಯಿತು.. "ದೂರದಿಂದಾಗಿ ನಕ್ಷತ್ರ ಗಳಿಂದ ಬೆಳಕು ಬರುವುದು ಕಡಿಮೆಯಾಗುತ್ತದೆ.
ಸರಿ...
ಆದರೆ ಎಷ್ಟು ಕಡಿಮೆಯಾಗುತ್ತದೆ ?" "ಎಷ್ಟು?...... ಎಷ್ಟು?....... ಎಷ್ಟು?....."
"
ಅಬ್ಭಾ!!" ಕಿರುಚಿದ ಓಲ್ಬರ ಮಧ್ಯ ರಾತ್ರೆಯಲ್ಲಿ...
"
ಈ ವಿಶ್ವದಲ್ಲಿ ಅನಂತ ನಕ್ಷತ್ರಗಳಿವೆ. ಅವುಗಳು ಎಷ್ಟು ದೂರವಾದರೂ ಇರಲಿ. ಅವು ಇದ್ದಲ್ಲಿಯೇ ಇರುತ್ತವೆ! ಅವು ಅನಂತ ಕಾಲದಿಂದ ಅಲ್ಲಿಯೇ ಇವೆ ಮತ್ತು ಇರುತ್ತವೆ. ಈ ಆದಿ ಇಲ್ಲದ ಅಂತ್ಯ ಇಲ್ಲದ ವಿಶ್ವ ದಲ್ಲಿ.."
("
ಮೇಲಿನ ಮಾತುಗಳನ್ನು ನಾನಲ್ಲ!! ಓಲ್ಬರ ಹೇಳಿದ್ದು.. ೨ ಶತಮಾನ ಗಳ ಹಿಂದೆ.. ನೆನಪಿಡಿ")
ಎಷ್ಟು
ಕಡಿಮೆಯಾದರೂ ಬೆಳಕು ಬರಲಿ. ಅನಂತ ಸಂಖ್ಯೆಯಿಂದ ಯಾವ ಸಣ್ಣ ಸಂಖ್ಯೆಯನ್ನೂ ಗುಣಿಸಿದರೆ ಆನಂತವೆ ತಾನೆ? ಅದೇ ರೀತಿ ಅನಂತ ನಕ್ಷತ್ರಗಳ ಸಂಖ್ಯೆ ಯನ್ನು ಅತ್ಯಂತ ಅಲ್ಪ ಪ್ರಮಾಣದ ಬೆಳಕಿನ ಜೊತೆಗೆ ಗುಣಿಸಿದರೂ... ಅಬ್ಭ್ಹಾ ಶಿವನೇ!!!
ಬರುವ ಸಂಖ್ಯೆ ಅನಂತ...
ಅಂದರೆ
... ನಮಗೆ ಬರಬೇಕಾಗಿದ್ದ ಬೆಳಕಿನ ಪ್ರಮಾಣ ಅನಂತ...
ಎಲ್ಲಾ
ದಿಕ್ಕಿನಿಂದಲೂ... ಎಲ್ಲ ಸಮಯದಲ್ಲೂ.. ರಾತ್ರಿಗೂ ಹಗಲಿಗೂ ವ್ಯತ್ಯಾಸವೇ ಇಲ್ಲ!!??
ಅಷ್ಟೇ
ಅಲ್ಲ..
ಸೂರ್ಯನಿಗಿಂತಲೂ
ಜಾಸ್ತಿ ಬೆಳಕು... ಸೂರ್ಯನಿಗಿಂತಲೂ ತೀಕ್ಷ್ಣ ಬೆಳಕು.... ಸೂರ್ಯನಿಗಿಂತಲೂ ಹೆಚ್ಚು ಉಷ್ಣತೆ........
ತಲೆ
ಕೆಟ್ಟಿತು ಅವನಿಗೆ... ಮತ್ತೊಮ್ಮೆ ಮಗದೊಮ್ಮೆ ತಾನು ಬರೆದದ್ದನ್ನು ಓದಿದ...
ಒಮ್ಮೆ
ವೇಗವಾಗಿ ಓದಿದ..(ನೀವೂ ಓದಿ ನೋಡಿ.!)
ಅಗೋ
ಅಗೋ ಇಲ್ಲೊಂದು ತಪ್ಪಿದೆ ಅನ್ನುವಾಗ ಅಲ್ಲಿ ತಪ್ಪು ಸಿಗಲಿಲ್ಲ..
ಎಲ್ಲಾಯಿತು
ತಪ್ಪು?.. ತಪ್ಪಂತೂ ಆಗಿದೆ ಎಂದು ಅವನಿಗೆ ಗೊತ್ತಿತ್ತೂ..
ಯಾಕೆಂದರೆ
ಸುತ್ತ ಮುತ್ತಲಿನ ಕತ್ತಲೆ ಅವನನ್ನು ನೋಡಿ ಅಣಕಿಸುತ್ತಿತ್ತು..
ಗಣಿತದಲ್ಲಂತೂ
ದೋಷವಿಲ್ಲ .. ಮತ್ತೆಲ್ಲಾಯಿತು ದೋಷ. ತಪ್ಪೆಲ್ಲಾಯಿತು?
ತಲೆ
ತಲೆ ಚಚ್ಚಿ ಕೊಂಡರೂ ಉತ್ತರ ಬರಲಿಲ್ಲ.
ಈಗ ಸರಳವೆಂದು ತಿಳಿದು ಕೊಂಡಿದ್ದ ಪ್ರಶ್ನೆ ಪೆಡಂಭೂತವಾಗಿ ಬೆಳೆದಿತ್ತು....
ಉಗುಳಲೂ ಆಗದ ನುಂಗಲೂ ಆಗದ ತುತ್ತಾಯಿತು...
"
ಅಷ್ಟು ಪ್ರಮಾಣದ ಬೆಳಕು ಎಲ್ಲಿಗೆ ಹೋಯಿತು?" ತನ್ನೆಲ್ಲ ಜ್ಞಾನವನ್ನು ಉಪಯೋಗಿಸಿ ಪ್ರಶ್ನೆ ಬಿಡಿಸಲೆತ್ನಿಸಿದ.. ಪ್ರಯೋಜನವಾಗಲಿಲ್ಲ..
ಜಗತ್ತಿನ ಹಲವಾರು ಮಹಾನ್ ಮಿದುಳುಗಳು ಈ ಪ್ರಶ್ನೆ ಯ ಉತ್ತರಕ್ಕಾಗಿ ಹುದುಕಾಡಿದವು.....
ಅವರು
ಕೊಟ್ಟ ಉತ್ತರ ಗಳೇನು?
ಕೊನೆಗೂ
ಓಲ್ಬರನ ಪ್ರಶ್ನೆಗೆ ಉತ್ತರ ಸಿಕ್ಕಿತೆ?
ಓಲ್ಬರನ
ಪ್ರಶ್ನೆ ವಿಶ್ವದ ಆದಿ ಅಂತ್ಯವನ್ನು ಅಳೆದದ್ದು ಹೇಗೆ?
ತಿಳಿಯೋಣ
... ಮತ್ತೂಮ್ಮೆ.. ಈ ಖಗೋಳ ದಲ್ಲಿ. ಅಲ್ಲಿಯವರೆಗೂ... ಈ ಖಗೋಳಿಯ.. ನಮಸ್ಕಾರ..
For the simple english version click:
http://meethariprasad.googlepages.com/

ಶುಕ್ರವಾರ, ಜನವರಿ 9, 2009

ಅಂತರರಾಷ್ಟ್ರೀಯ ಖಗೋಳ ವರ್ಷಕ್ಕೆ ಸ್ವಾಗತ..

















ತಮಗೆಲ್ಲರಿಗೂ ಅಂತರರಾಷ್ಟ್ರೀಯ ಖಗೋಳ ವರ್ಷಕ್ಕೆ ಸ್ವಾಗತ..
ಈ ವರ್ಷ ನಾವೆಲ್ಲರೂ ಅಂತರಿಕ್ಷವನ್ನು ಬೆರಗು ಕಣ್ಣುಗಳಿಂದ ನೋಡೋಣ..
ಅಂತರಿಕ್ಷದ ಬಗ್ಗೆ ತಿಳಿಯೋಣ..
ಈ ಬ್ರಹ್ಮಾಂಡದ ರಹಸ್ಯಗಳನ್ನು ಅರಿಯೋಣ..
ನಿಸರ್ಗದ ಮುಂದೆ ನಮ್ಮ ಕುಬ್ಜತೆಯನ್ನು ಅರಿಯೋಣ..
ಬನ್ನಿ..
ನಾವೆಲ್ಲರೂ ಅಂತರರಾಷ್ಟ್ರೀಯ ಖಗೋಳ ವರ್ಷವನ್ನು ಸಂಭ್ರಮ ಕುತೂಹಲ ಗಳಿಂದ ಆಚರಿಸೋಣ..

ಮಂಗಳವಾರ, ಆಗಸ್ಟ್ 26, 2008

ಅಂತರಿಕ್ಷದಲ್ಲಿ "ಅರಮನೆಗಳು"!!??



















ಮನುಷ್ಯ...
ಅಸಾಧ್ಯವನ್ನು ಸಾಧ್ಯ ಮಾಡಲು ಸದಾ ತತ್ಪರ ಪ್ರಾಣಿ.
ಇಂತಹ ಮಾನವನ ಮಂಡೆಯ ಒಳಗೆ ಬಂದದ್ದು ಅಂತರಿಕ್ಷದಲ್ಲಿ ಮನೆ ಕಟ್ಟುವ ವಿಚಾರ..
ಸರಿ ಬಿಡಿ.. ಹೊರಟ ನೋಡಿ ..
ವ್ಯೋಮದಲ್ಲಿ ಅರಮನೆ ಕಟ್ಟಲು!!
ಅರಮನೆಗಳನ್ನು ಅಂತರಿಕ್ಷ ನಿಲ್ದಾಣ ಗಳೆಂದು ಕರೆದ..
೨೦೧೫ನನ್ನೊಂದಿಗೆ ಈ "ತ್ರಿಶಂಕು ಸ್ವರ್ಗಗಳ"..
ಭೂತ..ಭವಿಷ್ಯ..ವರ್ತಮಾನಗಳ ಒಳಗೆ...
ಭೂತ..
ಇದೆಲ್ಲ ಶುರುವಾದದ್ದು ಹೊಟ್ಟೆಕಿಚ್ಚಿನಿಂದ!!??
ಅದು ೧೯೫೦ ರ ಕಾಲ..
ಎರಡನೇ ವಿಶ್ವಯುದ್ದ ಮುಗಿದಿತ್ತು..
ಆದರೆ ಒಂದು ಹೊಸ ಯುದ್ದ ಪ್ರಾರಂಭವಾಗಿತ್ತು..
ಶೀತಲ ಸಮರ..
ಅಮೇರಿಕಾದ "ಗಿಡುಗಕ್ಕೆ" ಸೋವಿಯತ್ತಿನ "ನಾಯಿಗಳ" ಭಯ..
ಸೋವಿಯತ್ತಿನ "ನಾಯಿಗಳಿಗೆ" ಅಮೆರಿಕಾದ "ಗಿದುಗಗಳ" ಮೇಲೆ ಹೊಟ್ಟೆಕಿಚ್ಚು..
ಪರಿಣಾಮ..
ವಿಶ್ವ ಒಳಗೊಳಗೇ ಎರಡು ಬಣಗಳಾಗಿ ಒಡೆದು ಹೋಯಿತು..
ಮಿಲಿಟರಿ,ತಂತ್ರಜ್ಞಾನ, ವಿಜ್ಞಾನ.. ಈ ರೀತಿ ಭೂಮಿಯ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಶುರುವಾಯಿತು..
ಭೂಮಿ ಇವರಿಗೆ ಸಾಕಾಗಲಿಲ್ಲ..
ಅಂತರಿಕ್ಷಕ್ಕೆ ಹಾರಿದರು..
೧೯೫೭, ಅಕ್ಟೋಬರ್ ೪ ರಂದು ಸೋವಿಯತ್ ಹಾರಿಸಿದ "ಸ್ಪುಟ್ನಿಕ್" ಎಂಬ ಪ್ರಥಮ ಉಪಗ್ರಹ ಅಕ್ಷರಶಃ "ವ್ಯೋಮಕ್ಕೆ ಕಿಚ್ಚು" ಹಚ್ಹ್ಚಿಸಿತು..































ಅಲ್ಲಿಂದ ಮುಂದೆ ವ್ಯೋಮದಲ್ಲಿ ಪ್ರಾಬಲ್ಯಕ್ಕಾಗಿ "ಗಿಡುಗ" ಮತ್ತು "ನಾಯಿಗಳ" ನಡುವೆ ಅದ್ಭುತ ಸ್ಪರ್ಧೆ ಶುರುವಾಯಿತು..
"ವ್ಯೋಮಕ್ಕಾಗಿ ಭೂಮಿಯಲ್ಲಿ ಹೋರಾಟ ಶುರುವಾಯಿತು !!!??"
ಪ್ರಥಮ ವ್ಯೋಮಯಾನ ಮುಂತಾದ ದಾಖಲೆಗಳು "ಸೋವಿಯತ್ತಿನ" ಪಾಲಾದರೆ...
ಚಂದ್ರನ ಮೇಲೆ ಪ್ರಥಮ ಮಾನವನನ್ನು ಕಳಿಸಿದ ಕೀರ್ತಿ ಅಮೇರಿಕಾದ ಪಾಲಾಯಿತು...
"(ಚಂದ್ರನ ಮೇಲೆ ಮಾನವ ಹೋಗಿದ್ದು ನಿಜವೇ? ಭೇಟಿ ಕೊಡಿ. ekhagola )
ಆಗ "ಸೋವಿಯತ್ತು" ಅಂತರಿಕ್ಷದಲ್ಲಿ ಮನೆ ಮಾಡುವ ಯೋಜನೆ ಹಾಕಿತು..
ಈಗ ಪ್ರಶ್ನೆ ಏನೆಂದರೆ "ಅಂತರಿಕ್ಷದಲ್ಲಿ ಎಲ್ಲಿ ಮನೆ ಮಾಡುವುದು?"???
ಅಮೇರಿಕಾ ಹೇಳಿತು "ಚಂದ್ರನ ಮೇಲೆ ಮನೆ ಮಾಡೋಣ" ಎಂದು..
ಸೋವಿಯತ್ ಹೇಳಿತು "ಅಷ್ಟು ದೂರದಲ್ಲಿ ಮನೆ ಮಾಡಲು ನಮಗೆ ಆಗೊಲ್ಲಪ್ಪ, ನಾವು ಭೂಮಿಯ ಸುತ್ತ ಸುತ್ತುವ ಕೃತಕ ಉಪಗ್ರಹವನ್ನೇ ಮನೆಯನ್ನಾಗಿ ಬದಲಾಯಿಸುತ್ತೀವೆ" ಎಂದು..
ಹೇಳಿದ್ದು ಮಾತ್ರವಲ್ಲ.. ಪ್ರಥಮ ಅಂತರಿಕ್ಷ ನಿಲ್ದಾಣ ವನ್ನು ೧೯೭೨ ರಲ್ಲಿ ನಿರ್ಮಿಸಿಯೇ ಬಿಟ್ಟಿತು..
ಅದೇ ಜಗತ್ತಿನ ಪ್ರಥಮ ವ್ಯೋಮ ನಿಲ್ದಾಣ "ಸಲ್ಯೂಟ್ ೧"(ಚಿತ್ರ ನೋಡಿ)























ಅಮೇರಿಕಾ ನಾನ್ಏನು ಕಮ್ಮಿ ಎಂದು ಮರುವರ್ಷವೇ ತನ್ನ ಪ್ರಥಮ ವ್ಯೋಮ ನಿಲ್ದಾಣ "sky lab" ಅನ್ನು ೧೯೭೩ ರಲ್ಲಿ ವ್ಯೋಮಕ್ಕೆ ಹಾರಿಸಿತು..(ಚಿತ್ರ ನೋಡಿ)



























"Sky lab" ಹೇಳುವಷ್ಟು ಯಶಸ್ಸನ್ನು ಪಡೆಯಲಿಲ್ಲ..
ಇದರಿಂದ ಅಮೇರಿಕಾ "ನಾವು ಚಂದ್ರನ ಮೇಲೆ ಮನೆ ಕಟ್ಟುತ್ತೇವೆ " ಎಂದು ಯೋಜನೆಗಳ ಮೇಲೆ ಯೋಜನೆ ಹಾಕಲು ಶುರು ಮಾಡಿತು..
ಇತ್ತ "ಸೋವಿಯತ್ತು" ಮಾತ್ರ "ಸಲ್ಯೂಟ್" ಸರಣಿಯಲ್ಲಿ ಹಲವಾರು ವ್ಯೋಮ ನಿಲ್ದಾಣ ಗಳನ್ನೇ ನಿರ್ಮಿಸಿ ಅಪಾರ ಅನುಭವ ಗಳಿಸಿತು..
ಈಗ ಒಂದು ಪ್ರಶ್ನೆ ..
ಅಂತರಿಕ್ಷದಲ್ಲಿ ದೊಡ್ಡ ಮನೆ ಕಟ್ಟುವುದು ಹೇಗೆ ಎಂದು?
ನಾವು ಮಾತನಾಡುತ್ತಿರುವ ಅರಮನೆಗಳು ಭೂಮಿಯ ಸುತ್ತ ೩೫೦ km
ಸರಾಸರಿ ಕಕ್ಷೆಯಲ್ಲಿ ಸುತ್ತುತ್ತಿರುವ ಪರಿವರ್ತಿತ ಕೃತಕ ಉಪಗ್ರಹಗಳು ಎಂಬುವುದನ್ನು ನಾವು ಮರೆಯಬಾರದು..
ದೊಡ್ಡ ಮನೆ ಕಟ್ಟಲು ಅಷ್ಟೆ ದೊಡ್ಡ ಉಪಗ್ರಹ ಕಳಿಸುವುದು ಬಹಳ ಕಷ್ಟದ ಮಾತು,,
ಆದರೆ ಅಡಿಗೆಮನೆ, ಟಾಯ್ಲೆಟ್, ಬಾತ್ರೂಂ ಇವುಗಳನ್ನು ಬೇರೆ ಬೇರೆಯಾಗಿ ಕಳಿಸಿ ಅಂತರಿಕ್ಷದಲ್ಲೇ ಜೋಡಿಸಿದರೆ
ಹೇಗೆ?
ಇದರಿಂದ ಎರಡು ಲಾಭಗಳಿವೆ..
ಮನೆಯನ್ನು ವಿಸ್ತರಿಸಬಹುದು..
ಖರ್ಚು ಮತ್ತು ಅಪಾಯ ಕಡಿಮೆ..
ಇದನ್ನೇ ೧೯೮೩ ರಲ್ಲಿ ಸೋವಿಯತ್ ಮಾಡಿದ್ದು..
ಜಗತ್ತಿನ ಪ್ರಪ್ರಥಮ "ವ್ಯೋಮದಲ್ಲೇ ಜೋಡಿಸಲ್ಪಟ್ಟ" ಬಹು ರೂಮು ಗಳಿರುವ ವ್ಯೋಮ ನಿಲ್ದಾಣ "ಮೀರ್-( ರಷ್ಯನ್ ಭಾಷೆಯಲ್ಲಿ ಶಾಂತಿ) ವ್ಯೋಮದಲ್ಲಿ ಜನ್ಮ ತಾಳಿತು..(ಚಿತ್ರ ನೋಡಿ)
















ಇದರಲ್ಲಿ ವರ್ಷಗಟ್ಟಲೆ ವ್ಯೋಮಯಾನಿ ಗಳಿದ್ದು ದಾಖಲೆ ಬರೆದರು..
ಅಷ್ಟು ಹೊತ್ತಿಗೆ ೧೯೯೧ ರ ಸುಮಾರಿಗೆ ಸೋವಿಯತ್ತು ಒಡೆದು ಪುಡಿ ಪುಡಿ ಯಾಗಿ ಹೋಯಿತು..
ಆಗ ಒಂದು ವಿಚಿತ್ರ ಪರಿಸ್ತಿತಿ ಬಂತು..
ಅತ್ತ ಅಮೇರಿಕಾ ಚಂದ್ರನ ಮೇಲೆ ಒಂದು ಟಾಯ್ಲೆಟ್ ಕಟ್ಟುವುದೂ ಕಷ್ಟ ಎಂದು ಮನಗಂಡಿತು..
ಇತ್ತ ಸೋವಿಯತ್ತಿನ ಬಳಿ ಇದ್ದ "Mir" ನಿಭಾಯಿಸಲೂ ಹಣವಿರಲಿಲ್ಲ..
ಅತ್ತ ಅಮೆರಿಕಾದ ಬಳಿ ಹಣವಿತ್ತು.. ಅನುಭವ ವಿರಲಿಲ್ಲ..
ರಷ್ಯದ ಬಳಿ ಹಣವಿರಲಿಲ್ಲ .. ಅನುಭವವಿತ್ತು..
ಇಬ್ಬರಿಗೂ ಅಂತರಿಕ್ಷದಲ್ಲಿ ಹೊಸ ವ್ಯೋಮ ನಿಲ್ದಾಣ ನಿರ್ಮಿಸುವ ಅಗತ್ಯವಿತ್ತು..
ಹಣ ಮತ್ತು ಅನುಭವ ಒಂದಾಗುವ "ಶುಭ ಕಾಲ" ಬಂದಿತ್ತು..
ವಿಶ್ವದ ಹದಿನಾರು ರಾಷ್ಟ್ರ ಗಳು ಒಂದಾಗಿ ವ್ಯೋಮದಲ್ಲಿ "ನ ಭೂತೋ" ಎಂಬಂತಹ ಅರಮನೆ ಕಟ್ಟಲು ಸಜ್ಜಾದವು..
ಇದರ ಫಲ ಸ್ವರೂಪವೇ "ಅಂತರ ರಾಷ್ಟ್ರೀಯ ಅಂತರಿಕ್ಷ ನಿಲ್ದಾಣ" ವ್ಯೋಮದಲ್ಲಿ ಜನ್ಮ ತಾಳಲು ಆರಂಭಿಸಿತು. ೩೫೦ km ದೂರ ದಲ್ಲಿ ಅದ್ಭುತ ಅಂತರಿಕ್ಷ ನಿಲ್ದಾಣದ ನಿರ್ಮಾಣ ಭರದಿಂದ ಸಾಗಿದೆ. ೨೦೧೫ರಲ್ಲಿ ಈ ಕಾರ್ಯ ಮುಗಿಯುವ ಸಾಧ್ಯತೆ ಇದೆ (ಚಿತ್ರ ನೋಡಿ).










ಶನಿವಾರ, ಜುಲೈ 26, 2008

ಖಗೋಳ ವೈಭವ ಭಾಗ ೨





ಒರಿಯೋನ್ ನಿಹಾರಿಕೆಯ ವೈಭವ

"ನಕ್ಷತ್ರಗಳ ಪಾಕಶಾಲೆ"

ಮಹಾವ್ಯಾಧ (ಚಿತ್ರ ನೋಡಿ) ನಕ್ಷತ್ರರಾಶಿಯಲ್ಲಿರುವ ಈ ನಿಹಾರಿಕೆಯ ಸೌಂದರ್ಯ ಅನುಪಮ.
ಮಹಾವ್ಯಾಧದಲ್ಲಿ ಎಲ್ಲಿದೆ ?


ವೈಶಿಷ್ಟ್ಯಗಳು
೧: ಮನುಷ್ಯನಿಗೆ ಗೊತ್ತಾದ ಮೊದಮೊದಲ ನಿಹಾರಿಕೆಗಳಲ್ಲಿ ಒಂದು.
೨: ಭೂಮಿಯಿಂದ ಬರೀ ಕಣ್ಣಲ್ಲಿ ಕಾಣಬಹುದಾದ ನಿಹಾರಿಕೆಗಳಲ್ಲಿ ಒಂದು.
೩:ಭೂಮಿಗೆ ಹತ್ತಿರವಿರುವ ಅತ್ಯಂತ ಹೆಚ್ಚು ನಕ್ಷತ್ರಗಳು ಹುಟ್ಟುತ್ತಿರುವ ನಿಹಾರಿಕೆಗಳಲ್ಲೊಂದು.








Posted by Picasa

ಬುಧವಾರ, ಜುಲೈ 16, 2008

ಖಗೋಳ ವೈಭವ ೧ ..

ಈ ಬ್ರಹ್ಮಾಂಡ ಬಲು ಸುಂದರ...

ಅಷ್ಟೇ ನಿಗೂಢ...

ಅದರ ಸೌಂದರ್ಯ, ವೈಭವ, ನೋಡಿ ಬೆರಗಾಗೋಣ ಬನ್ನಿ...


ಬೆಕ್ಕಿನ ಕಣ್ಣಿನ ನೀಹಾರಿಕೆ...(Cat's Eye Nebulae)..
Draco ನಕ್ಷತ್ರ ರಾಶಿಯಲ್ಲಿರುವ ಈ ಗ್ರಹೀಯ ನೀಹಾರಿಕೆಯ (Planetary Nebula) ಸೌಂದರ್ಯ ಅನುಪಮ ,ಅಷ್ಟೇ ನಿಗೂಢ..
ವಿಲಿಯಮ್ ಹರ್ಷೆಲ್ ಫೆಬ್ರವರಿ ೧೭೮೬ ರಲ್ಲಿ ಮೊದಲ ಬಾರಿಗೆ ಈ ನಿಹಾರಿಕೆಯನ್ನು ಕಂಡುಹಿಡಿದ.
ಇದರ ಕ್ಲಿಷ್ಟ ರೂಪ ವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಇಂದಿಗೂ ನಡೆದಿದೆ..
ಖಗೋಳದ ಗರ್ಭದಲ್ಲಿ ಇಂತಹ ಸಾವಿರಾರು ಅಮೋಘ ರಚನೆಗಳಿವೆ...
ಮುಂದಿನ ಖಗೋಳದ ಸಂಚಿಕೆಗಳಲ್ಲಿ ಇಂತಹ ನೂರಾರು ಅದ್ಭುತಗಳು ನಿಮಗಾಗಿ ಕಾದಿವೆ.
ಮುಂದಿನ ವಾರ ಮತ್ತೊಂದು ಅದ್ಭುತದೊಂದಿಗೆ ಖಗೋಳದಲ್ಲಿ ಮತ್ತೊಮ್ಮೆ ಭೇಟಿಯಾಗೋಣ.