ಮಂಗಳವಾರ, ಜೂನ್ 12, 2012

ರಂಗೋಲಿ - 4
ಚಿತ್ರ 2 : APPARENT SPHERE : ಸಮಭಾಜಕ ವ್ರತ್ತದ ಬಳಿ ಇರುವ ಈ ವೀಕ್ಷಕನಿಗೆ ಉತ್ತರ ಬಿಂದುವಿನ ಬಳಿ ಧ್ರುವ ತಾರೆ ಇರುವುದು. [ವಾತಾವರಣ ದಟ್ಟಣೆಯ ಅಡಚಣೆಯಿಂದಾಗಿ ಈ ವೀಕ್ಷಕನಿಗೆ ಧ್ರುವ ತಾರೆ ಲಭ್ಯವಿಲ್ಲ] ಈತನ ದಿಗಂತವು ಸಮಭಾಜಕ ವ್ರತ್ತದ ತಲಕ್ಕೆ ಲಂಬವಾಗಿದ್ದು ಅಕ್ಷಕ್ಕೆ ಸಮಾಂತರದಲ್ಲಿದೆ. ಮತ್ತು ವಿಷುವದ್ ವ್ರತ್ತವು ಪೂರ್ವ ಪಶ್ಚಿಮ ಮತ್ತು ಶಿರೋಬಿಂದುವಿನ ಮುಲಕ ಹಾದು ಹೋಗಿದೆ. ಉತ್ತರ ಮತ್ತು ದಕ್ಷಿಣ ಖಗೋಲಧ್ರುವಗಳು ಉತ್ತರ ಮತ್ತು ದಕ್ಷಿಣ ಬಿಂದುಗಳಲ್ಲಿ ಐಕ್ಯವಾಗಿರುತ್ತವೆ. ಹಿಂದೆ ಹೇಳಿದ ಭೂಮಿಯ ಹೊರಗಿನ ವೀಕ್ಷಕನ ನೋಟಕ್ಕೂ ಸಮಭಾಜಕವ್ರತ್ತದ ಮೇಲಿರುವ ಈ ವೀಕ್ಷಕನ ನೋಟ ಅನುಭವಕ್ಕೂ ಯಾವುದೇ ವ್ಯತ್ಯಾಸವಿಲ್ಲ.